1 ಕೊರಿಂಥದವರಿಗೆ 11 : 1 (KNV)
ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವೂ ನನ್ನನ್ನು ಅನುಸರಿಸುವವರಾಗಿರ್ರಿ.
1 ಕೊರಿಂಥದವರಿಗೆ 11 : 2 (KNV)
ಸಹೋದರರೇ, ನೀವು ಎಲ್ಲಾದರಲ್ಲಿಯೂ ನನ್ನನ್ನು ಜ್ಞಾಪಕಮಾಡಿಕೊಂಡು ನಾನು ನಿಮಗೆ ಒಪ್ಪಿಸಿಕೊಟ ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.
1 ಕೊರಿಂಥದವರಿಗೆ 11 : 3 (KNV)
ಕಟ್ಟಳೆಗಳನ್ನು ಅನುಸರಿಸಿ ನಡೆಯುತ್ತೀರೆಂದು ನಿಮ್ಮನ್ನು ಹೊಗಳುತ್ತೇನೆ.
1 ಕೊರಿಂಥದವರಿಗೆ 11 : 4 (KNV)
ಆದರೂ ಪ್ರತಿ ಪುರುಷನಿಗೂ ಕ್ರಿಸ್ತನು ತಲೆ, ಸ್ತ್ರೀಗೆ ಪುರುಷನು ತಲೆ, ಕ್ರಿಸ್ತನಿಗೆ ದೇವರು ತಲೆಯಾಗಿದ್ದಾನೆ ಎಂದು ನೀವು ತಿಳಿಯಬೇಕೆಂದು ನಾನು ಅಪೇಕ್ಷಿಸುತ್ತೇನೆ.
1 ಕೊರಿಂಥದವರಿಗೆ 11 : 5 (KNV)
ತಲೆಯನ್ನು ಮುಚ್ಚಿಕೊಂಡು ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಪ್ರತಿಯೊಬ್ಬ ಪುರುಷನು ತನ್ನ ತಲೆಯನ್ನು ಅವಮಾನಪಡಿಸುತ್ತಾನೆ.
1 ಕೊರಿಂಥದವರಿಗೆ 11 : 6 (KNV)
ಆದರೆ ತಲೆಯಮೇಲೆ ಮುಸುಕು ಹಾಕಿಕೊಳ್ಳದೆ ಪ್ರಾರ್ಥನೆಯನ್ನಾಗಲಿ ಪ್ರವಾದನೆಯನ್ನಾಗಲಿ ಮಾಡುವ ಪ್ರತಿಯೊಬ್ಬ ಸ್ತ್ರೀಯು ತನ್ನ ತಲೆಯನ್ನು ಅವಮಾನಪಡಿಸುತ್ತಾಳೆ. ಯಾಕಂದರೆ ಸ್ತ್ರೀಯು ಮುಸುಕಿಲ್ಲದಿರುವದೂ ತಲೆಬೋಳಿಸಿ ಕೊಂಡಿರುವದೂ ಒಂದೇ.
1 ಕೊರಿಂಥದವರಿಗೆ 11 : 7 (KNV)
ಆದರೆ ಪುರುಷನು ದೇವರ ಪ್ರತಿರೂಪವೂ ಪ್ರಭಾವವೂ ಆಗಿರುವದರಿಂದ ತಲೆಯನ್ನು ಮುಚ್ಚಿ ಕೊಳ್ಳಕೂಡದು; ಸ್ತ್ರೀಯಾದರೋ ಪುರುಷನ ಪ್ರಭಾವ ವಾಗಿದ್ದಾಳೆ.
1 ಕೊರಿಂಥದವರಿಗೆ 11 : 8 (KNV)
ಪುರುಷನು ಸ್ತ್ರೀಯಿಂದ ನಿರ್ಮಿತ ನಾಗಲಿಲ್ಲ; ಸ್ತ್ರೀಯು ಪುರುಷನಿಂದ ನಿರ್ಮಿತವಾದಳು.
1 ಕೊರಿಂಥದವರಿಗೆ 11 : 9 (KNV)
ಇದಲ್ಲದೆ ಪುರುಷನು ಸ್ತ್ರೀಯ ನಿಮಿತ್ತವಾಗಿ ನಿರ್ಮಾಣವಾಗಲಿಲ್ಲ; ಆದರೆ ಸ್ತ್ರೀಯು ಪುರುಷನ ನಿಮಿತ್ತವಾಗಿ ನಿರ್ಮಾಣವಾದಳು.
1 ಕೊರಿಂಥದವರಿಗೆ 11 : 10 (KNV)
ಈ ಕಾರಣದಿಂದ ದೂತರ ನಿಮಿತ್ತವಾಗಿ ಸ್ತ್ರೀಗೆ ತನ್ನ ಶಿರಸ್ಸಿನ ಮೇಲೆ ಅಧಿಕಾರವಿರಬೇಕು.
1 ಕೊರಿಂಥದವರಿಗೆ 11 : 11 (KNV)
ಆದರೂ ಕರ್ತನಲ್ಲಿ ಸ್ತ್ರೀಯಿಲ್ಲದೆ ಪುರುಷನೂ ಪುರುಷನಿಲ್ಲದೆ ಸ್ತ್ರೀಯೂ ಇಲ್ಲ.
1 ಕೊರಿಂಥದವರಿಗೆ 11 : 12 (KNV)
ಸ್ತ್ರೀಯು ಪುರುಷನಿಂದ ಹೇಗೆ ಉತ್ಪತ್ತಿ ಯಾದಳೋ ಹಾಗೆಯೇ ಪುರುಷನೂ ಸ್ತ್ರೀ ಯಿಂದ ಉತ್ಪತ್ತಿಯಾದನು. ಸಮಸ್ತಕ್ಕೂ ದೇವರೇ ಮೂಲ ಕಾರಣನು.
1 ಕೊರಿಂಥದವರಿಗೆ 11 : 13 (KNV)
ನಿಮ್ಮೊಳಗೆ ನೀವೇ ತೀರ್ಪು ಮಾಡಿ ಕೊಳ್ಳಿರಿ; ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವದು ಯುಕ್ತವೋ?
1 ಕೊರಿಂಥದವರಿಗೆ 11 : 14 (KNV)
ಪುರುಷನು ಕೂದಲು ಬೆಳೆಸಿಕೊಂಡರೆ ಅದು ಅವನಿಗೆ ಅವಮಾನ ಕರವಾಗಿದೆಯೆಂದು ನಿಮಗೆ ಸ್ವಭಾವ ಸಿದ್ಧವಾಗಿ ತಿಳಿಯುತ್ತದಲ್ಲವೋ?
1 ಕೊರಿಂಥದವರಿಗೆ 11 : 15 (KNV)
ಆದರೆ ಸ್ತ್ರೀಯು ಕೂದಲು ಬೆಳೆಸಿಕೊಂಡರೆ ಅವಳಿಗೆ ಮುಸುಕಿಗೆ ಬದಲಾಗಿ ಕೊಡಲ್ಪಟ್ಟಿರುವದರಿಂದ ಅದು ಅವಳಿಗೆ ಗೌರವ ವಾಗಿದೆ;
1 ಕೊರಿಂಥದವರಿಗೆ 11 : 16 (KNV)
ಒಬ್ಬನು ವಾಗ್ವಾದ ಪ್ರಿಯನಾಗಿ ಕಾಣಿಸಿ ಕೊಂಡರೆ ಇಂಥ ಪದ್ಧತಿ ನಮ್ಮಲ್ಲಿಲ್ಲ, ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳುಕೊಳ್ಳಲಿ.
1 ಕೊರಿಂಥದವರಿಗೆ 11 : 17 (KNV)
ನಾನು ಹೀಗೆ ನಿಮಗೆ ಅಪ್ಪಣೆಕೊಡುವಲ್ಲಿ ನಿಮ್ಮನ್ನು ಹೊಗಳುವದಿಲ್ಲ; ಯಾಕಂದರೆ ನೀವು ಕೂಡಿಬರು ವದರಿಂದ ಕೇಡಾಗುತ್ತದೆಯೇ ಹೊರತು ಮೇಲಾ ಗುವದಿಲ್ಲ.
1 ಕೊರಿಂಥದವರಿಗೆ 11 : 18 (KNV)
ಹೇಗಂದರೆ ಮೊದಲನೆಯದು ನೀವು ಸಭೆಯಾಗಿ ಕೂಡಿಬರುವಾಗ ನಿಮ್ಮಲ್ಲಿ ಭೇದಗಳು ಉಂಟಾಗುತ್ತವೆಂದು ಕೇಳುತ್ತೇನೆ; ಇದು ನಿಜವೆಂದು ಸ್ವಲ್ಪಮಟ್ಟಿಗೆ ನಂಬುತ್ತೇನೆ.
1 ಕೊರಿಂಥದವರಿಗೆ 11 : 19 (KNV)
ನಿಮ್ಮಲ್ಲಿಯೂ ಇಂಥಿಂಥ ವರು ಯೋಗ್ಯರೆಂದು ಕಾಣಬರುವಂತೆ ಭಿನ್ನಾಭಿಪ್ರಾಯ ಗಳು ಇರುವದು ಅವಶ್ಯವೇ.
1 ಕೊರಿಂಥದವರಿಗೆ 11 : 20 (KNV)
ಆದರೆ ನೀವು ಒಂದು ಸ್ಥಳದಲ್ಲಿ ಕೂಡಿಬರುವಾಗ ಮಾಡುವ ಭೋಜನವು ಕರ್ತನ ಭೋಜನವಲ್ಲ.
1 ಕೊರಿಂಥದವರಿಗೆ 11 : 21 (KNV)
ಭೋಜನವಾಗುವಲ್ಲಿ ಪ್ರತಿ ಯೊಬ್ಬನು ತನ್ನದನ್ನು ಮತ್ತೊಬ್ಬರಿಗಿಂತ ಮುಂದಾಗಿ ಊಟಮಾಡುತ್ತಾನೆ; ಹೀಗೆ ಒಬ್ಬನು ಹಸಿದಿರುತ್ತಾನೆ, ಮತ್ತೊಬ್ಬನು ಕುಡಿದು ಮತ್ತನಾಗಿರುತ್ತಾನೆ.
1 ಕೊರಿಂಥದವರಿಗೆ 11 : 22 (KNV)
ಏನು, ನೀವು ಉಣ್ಣುವದಕ್ಕೂ ಕುಡಿಯುವದಕ್ಕೂ ಮನೆಗಳಿಲ್ಲದೆ ಇದ್ದೀರಾ? ಅಥವಾ ದೇವರ ಸಭೆಯನ್ನು ಅಸಡ್ಡೆಮಾಡಿ ಏನೂ ಇಲ್ಲದವರನ್ನು ನಾಚಿಕೆಪಡಿಸುತ್ತೀರಾ? ನಾನು ನಿಮಗೇನು ಹೇಳಲಿ? ಈ ವಿಷಯದಲ್ಲಿ ನಾನು ನಿಮ್ಮನ್ನು ಹೊಗಳಲೋ? ಹೊಗಳುವದಿಲ್ಲ.
1 ಕೊರಿಂಥದವರಿಗೆ 11 : 23 (KNV)
ನಾನು ನಿಮಗೆ ಒಪ್ಪಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ, ಕರ್ತನಾದ ಯೇಸು ತಾನು ಹಿಡಿದುಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು
1 ಕೊರಿಂಥದವರಿಗೆ 11 : 24 (KNV)
ಸ್ತ್ರೋತ್ರಮಾಡಿ ಅದನ್ನು ಮುರಿದು--ತೆಗೆದುಕೊಳ್ಳಿರಿ, ತಿನ್ನಿರಿ; ಇದು ನಿಮಗೋಸ್ಕರ ಮುರಿಯಲ್ಪಟ್ಟ ನನ್ನ ದೇಹ; ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡಿರಿ ಅಂದನು.
1 ಕೊರಿಂಥದವರಿಗೆ 11 : 25 (KNV)
ಅದೇ ರೀತಿಯಾಗಿ ಊಟವಾದ ಮೇಲೆ ಆತನು ಪಾತ್ರೆಯನ್ನು ತೆಗೆದುಕೊಂಡು--ಈ ಪಾತ್ರೆಯು ನನ್ನ ರಕ್ತದಲ್ಲಿರುವ ಹೊಸಒಡಂಬಡಿಕೆ ಯಾಗಿದೆ; ನೀವು ಇದರಲ್ಲಿ ಪಾನಮಾಡುವಾಗೆಲ್ಲಾ ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಇದನ್ನು ಮಾಡಿರಿ ಅಂದನು.
1 ಕೊರಿಂಥದವರಿಗೆ 11 : 26 (KNV)
ನೀವು ಈ ರೊಟ್ಟಿಯನ್ನು ತಿಂದು ಈ ಪಾತ್ರೆಯಲ್ಲಿ ಪಾನಮಾಡುವಷ್ಟು ಸಾರಿ ಕರ್ತನ ಮರಣ ವನ್ನು ಆತನು ಬರುವ ತನಕ ಪ್ರಸಿದ್ಧಿಪಡಿಸುತ್ತೀರಿ.
1 ಕೊರಿಂಥದವರಿಗೆ 11 : 27 (KNV)
ಹೀಗಿರುವದರಿಂದ ಯಾವನಾದರೂ ಅಯೋಗ್ಯ ವಾಗಿ ಈ ರೊಟ್ಟಿಯನ್ನು ತಿಂದು ಕರ್ತನ ಪಾತ್ರೆಯಲ್ಲಿ ಪಾನಮಾಡಿದರೆ ಅವನು ಕರ್ತನ ದೇಹಕ್ಕೂ ರಕ್ತಕ್ಕೂ ಅಪರಾಧ ಮಾಡಿದವನಾಗಿರುವನು.
1 ಕೊರಿಂಥದವರಿಗೆ 11 : 28 (KNV)
ಆದರೆ ಒಬ್ಬನು ತನ್ನನ್ನು ಪರೀಕ್ಷಿಸಿಕೊಂಡವನಾಗಿ ಆ ರೊಟ್ಟಿಯಲ್ಲಿ ತಕ್ಕೊಂಡು ತಿನ್ನಲಿ, ಆ ಪಾತ್ರೆಯಲ್ಲಿ ಕುಡಿಯಲಿ.
1 ಕೊರಿಂಥದವರಿಗೆ 11 : 29 (KNV)
ಯಾಕಂದರೆ ಕರ್ತನ ದೇಹವೆಂದು ವಿವೇಚಿಸದೆ ಅಯೋಗ್ಯವಾಗಿ ತಿಂದು ಕುಡಿಯುವವನು ಹಾಗೆ ತಿಂದು ಕುಡಿಯುವದರಿಂದ ನ್ಯಾಯತೀರ್ಪಿಗೊಳ ಗಾಗುವನು.
1 ಕೊರಿಂಥದವರಿಗೆ 11 : 30 (KNV)
ಈ ಕಾರಣದಿಂದಲೇ ನಿಮ್ಮಲ್ಲಿ ಬಹು ಮಂದಿ ಬಲಹೀನರೂ ರೋಗಿಗಳೂ ಆಗಿದ್ದಾರೆ; ಅನೇಕರು ನಿದ್ರಿಸುತ್ತಾರೆ.
1 ಕೊರಿಂಥದವರಿಗೆ 11 : 31 (KNV)
ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ.
1 ಕೊರಿಂಥದವರಿಗೆ 11 : 32 (KNV)
ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.
1 ಕೊರಿಂಥದವರಿಗೆ 11 : 33 (KNV)
ಆದಕಾರಣ ನನ್ನ ಸಹೋದರರೇ, ಈ ಭೋಜನವನ್ನು ಮಾಡುವದಕ್ಕೆ ನೀವು ಕೂಡಿ ಬರುವಾಗ ಒಬ್ಬರನ್ನೊಬ್ಬರು ಕಾದುಕೊಳ್ಳಿರಿ.ಒಬ್ಬನು ಹಸಿದರೆ ಅವನು ಮನೆಯಲ್ಲೇ ಊಟ ಮಾಡಲಿ; ನೀವು ಕೂಡಿಬಂದದ್ದು ನ್ಯಾಯತೀರ್ಪಿಗೊಳಗಾಗು ವದಕ್ಕೆ ಕಾರಣವಾಗಬಾರದು. ಮಿಕ್ಕಾದ ಸಂಗತಿಗಳನ್ನು ನಾನು ಬಂದಾಗ ಕ್ರಮಪಡಿಸುತ್ತೇನೆ.
1 ಕೊರಿಂಥದವರಿಗೆ 11 : 34 (KNV)
ಒಬ್ಬನು ಹಸಿದರೆ ಅವನು ಮನೆಯಲ್ಲೇ ಊಟ ಮಾಡಲಿ; ನೀವು ಕೂಡಿಬಂದದ್ದು ನ್ಯಾಯತೀರ್ಪಿಗೊಳಗಾಗು ವದಕ್ಕೆ ಕಾರಣವಾಗಬಾರದು. ಮಿಕ್ಕಾದ ಸಂಗತಿಗಳನ್ನು ನಾನು ಬಂದಾಗ ಕ್ರಮಪಡಿಸುತ್ತೇನೆ.

1 2 3 4 5 6 7 8 9 10 11 12 13 14 15 16 17 18 19 20 21 22 23 24 25 26 27 28 29 30 31 32 33 34

BG:

Opacity:

Color:


Size:


Font: